Page 1 / 1 100%
Telegram Join My Telegram WhatsApp Join My WhatsApp

ಎರಡು ದಿನಗಳಲ್ಲಿ 145 ಹತ್ಯೆ: ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಪ್ರತೀಕಾರದ ರಕ್ತಪಾತ

ಇಸ್ಲಾಮಾಬಾದ್‌:

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ಕ್ರೂರ ಕಾರ್ಯಾಚರಣೆ ಮತ್ತೊಮ್ಮೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತನ್ನ ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಶನ್‌ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಗೆ ಪ್ರತೀಕಾರವೆಂದು ಹೇಳಿಕೊಂಡು, ಪಾಕಿಸ್ತಾನವು ಕೇವಲ ಎರಡು ದಿನಗಳಲ್ಲಿ 145ಕ್ಕೂ ಹೆಚ್ಚು ಬಲೂಚಿಗಳನ್ನು ಹತ್ಯೆ ಮಾಡಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವುದು ಪಾಕ್‌ ಸೇನೆಯೇ ಆಗಿದೆ.

ಬಲೂಚಿಸ್ತಾನದಲ್ಲಿ ಆರಂಭವಾಗಿರುವ ‘ಆಪರೇಷನ್‌ ಹಿರೋಫ್‌ 2.0’ ಬಳಿಕ, ಪಾಕಿಸ್ತಾನ ಸೇನೆ ಪ್ರಾಂತ್ಯದ ಹಲವೆಡೆ ನುಗ್ಗಿ ಭಾರೀ ಗುಂಡಿನ ದಾಳಿ ಹಾಗೂ ಬಾಂಬ್ ದಾಳಿಗಳನ್ನು ನಡೆಸಿದೆ. ಮಹಿಳೆಯರು ಮತ್ತು ಸಾಮಾನ್ಯ ನಾಗರಿಕರೂ ಈ ಹಿಂಸಾಚಾರದ ಬಲಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಆದರೆ ಪಾಕಿಸ್ತಾನ ಸರ್ಕಾರ, ಸತ್ತವರೆಲ್ಲರೂ ಭಯೋತ್ಪಾದಕರೇ ಎಂದು ಹೇಳಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ.

ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಮಾಹಿತಿ ನೀಡಿದ್ದು, “ಸುಮಾರು 40 ಗಂಟೆಗಳ ಕಾಲ ನಡೆದ ಸೇನಾ ಕಾರ್ಯಾಚರಣೆಯಲ್ಲಿ 145 ಜನರು ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ. ಪ್ರಾಂತ್ಯದ ನೈಋತ್ಯ ಭಾಗಗಳಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಕ್ವೆಟ್ಟಾದಲ್ಲಿನ ಪೊಲೀಸ್ ಠಾಣೆ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳು ನಾಶವಾಗಿವೆ.

ಪಾಕಿಸ್ತಾನದ ಕಿರಿಯ ಆಂತರಿಕ ಸಚಿವ ತಲಾಲ್ ಚೌಧರಿ, “ಸಾಮಾನ್ಯ ನಾಗರಿಕರ ವೇಷದಲ್ಲಿದ್ದ ದಾಳಿಕೋರರು ಆಸ್ಪತ್ರೆಗಳು, ಶಾಲೆಗಳು, ಮಾರುಕಟ್ಟೆಗಳಿಗೆ ನುಗ್ಗಿ ದಾಳಿ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೆಹಬಾಜ್‌ ಷರೀಫ್‌ ಸರ್ಕಾರ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ.

ಇದೇ ವೇಳೆ, ಪಾಕಿಸ್ತಾನವು ಎಂದಿನಂತೆ ಈ ಘಟನೆಗೆ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, “ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಂದ ಜಗತ್ತಿನ ಗಮನ ಬೇರೆಡೆಗೆ ತಿರುಗಿಸಲು ಇಂತಹ ಆರೋಪಗಳನ್ನು ಮಾಡುತ್ತಿದೆ” ಎಂದು ತಿರುಗೇಟು ನೀಡಿದೆ.
ಬಲೂಚಿಸ್ತಾನ ಲಿಬರೇಶನ್‌ ಆರ್ಮಿ ತನ್ನ ಕಾರ್ಯಾಚರಣೆಗೆ ‘ಕಪ್ಪು ಚಂಡಮಾರುತ’ ಎಂದು ಹೆಸರಿಟ್ಟಿದ್ದು, ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ದಾಳಿಗಳನ್ನು ಮುಂದುವರಿಸುತ್ತಿದೆ. ಈ ನಡುವೆ ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದ್ದ ಮೀರ್‌ ಯಾರ್‌ ಬಲೂಚ್‌ ಅವರ ಎಚ್ಚರಿಕೆಯೂ ಮತ್ತೊಮ್ಮೆ ಚರ್ಚೆಗೆ ಬಂದಿದೆ.

 

  • Related Posts

    ರೈಲ್ವೆ ಅಪ್ರೆಂಟಿಸ್ ನೇಮಕಾತಿ 2026: 2801 ಹುದ್ದೆಗಳಿಗೆ ಅರ್ಜಿ ಹಾಕಿ – 10ನೇ ತರಗತಿ ಪಾಸಾಗಿದ್ರೆ ಸಾಕು!

    ರೈಲ್ವೆ ಅಪ್ರೆಂಟಿಸ್ ನೇಮಕಾತಿ 2026: 2801 ಹುದ್ದೆಗಳಿಗೆ ಅರ್ಜಿ ಹಾಕಿ – 10ನೇ ತರಗತಿ ಪಾಸಾಗಿದ್ರೆ ಸಾಕು! ಸರ್ಕಾರಿ ಕೆಲಸ ಮಾಡಬೇಕು ಅಂತ ಕನಸು ಕಾಣ್ತಿರುವ ಯುವಕ-ಯುವತಿಯರಿಗೆ ಇದು ಒಂದು ದೊಡ್ಡ ಅವಕಾಶ. ರೈಲ್ವೆ ನೇಮಕಾತಿ ಕೋಶ (RRC), ದಕ್ಷಿಣ ಮಧ್ಯ …

    Read more

    Iran–Israel ಸಂಘರ್ಷದ ಪರಿಣಾಮ: ಷೇರು ಮಾರುಕಟ್ಟೆ ಧರೆಗುರುಳಿತು,ಏನು ಮಾಡಬೇಕು?

    ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಭಾರೀ ಮಾರಾಟದ ಒತ್ತಡಕ್ಕೆ ಒಳಗಾಗಿ ತೀವ್ರ ಕುಸಿತ ಕಂಡಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿರುವುದು, ಜಾಗತಿಕ ಮಾರುಕಟ್ಟೆಗಳಲ್ಲಿ ಆತಂಕ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರ ಭಾರಿ ಮಾರಾಟ – ಈ ಎಲ್ಲ ಕಾರಣಗಳು …

    Read more

    Leave a Reply

    Your email address will not be published. Required fields are marked *

    You Missed

    ರೈಲ್ವೆ ಅಪ್ರೆಂಟಿಸ್ ನೇಮಕಾತಿ 2026: 2801 ಹುದ್ದೆಗಳಿಗೆ ಅರ್ಜಿ ಹಾಕಿ – 10ನೇ ತರಗತಿ ಪಾಸಾಗಿದ್ರೆ ಸಾಕು!

    ಭಾರತ T20 ವಿಶ್ವಕಪ್ 2026 ಚಾಂಪಿಯನ್! ನ್ಯೂಜಿಲ್ಯಾಂಡ್ ವಿರುದ್ಧ 96 ರನ್ ಗಳ ಐತಿಹಾಸಿಕ ಗೆಲುವು,!!! ಬುಮ್ರಾ ಮ್ಯಾಜಿಕ್

    ಮಾರ್ಚ್ 8 ಚಿನ್ನದ ಬೆಲೆ: ವಾರಾಂತ್ಯದಲ್ಲಿ ಜಿಗಿತ – ಈಗ 1 ಗ್ರಾಂ ಚಿನ್ನ ಎಷ್ಟು ಗೊತ್ತಾ?

    ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್: ಅಕ್ಕಿ ಬದಲು ಇಂದಿರಾ ಕಿಟ್ – ಸಂಪೂರ್ಣ ಮಾಹಿತಿ

    ಐತಿಹಾಸಿಕ ಗೆಲುವು! ಟಿ20 ವಿಶ್ವಕಪ್ ಫೈನಲ್‌ಗೆ ಭಾರತ – ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮ

    ₹90ಕ್ಕೆ ಎಸಿ ಟ್ರಾವೆಲ್! ಕನಕಪುರ & ರಾಮನಗರಕ್ಕೆ BMTC ಭರ್ಜರಿ ಹೊಸ ಸೇವೆ